Events

ಉಳ್ಳಾಲ ಪುರಸಭಾ ವತಿಯಿಂದ 2011-12ನೇ ಸಾಲಿನ ಶೇ. 22.75ರ ಯೋಜನೆಯಡಿಯಲ್ಲಿ ಉಳ್ಳಾಲ ಪುರಸಭಾ ವ್ಯಾಪ್ತಿಯ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸುವ ಕಾರ್ಯವನ್ನು ದಿ.22-03-2012 ರಂದು ಪುರಸಭೆಯ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದು ಸಭೆಯ ಅಧ್ಯಕ್ಷತೆಯನ್ನು ಸ್ಥಳೀಯ ಸದಸ್ಯರಾದ ಶ್ರೀ ಯು.ಕೆ.ಗೋಪಾಲ್ ವಹಿಸಿದ್ದು, ಪುರಸಭಾ ಅಧ್ಯಕ್ಷರಾದ ಶ್ರೀ ಬಾಜಿಲ್ ಡಿ'ಸೋಜ, ಉಪಾಧ್ಯಕ್ಷರಾದ ಕು.ಭವಾನಿಯವರು ಮತ್ತು ಪುರಸಭಾ ಸದಸ್ಯರುಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಒಟ್ಟು 138 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. 

_____________________________________________________________________________________                   

ದಿನಾಂಕ 25-11-2011 ರಂದು ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ಪರಿಸರ ರಕ್ಷಣಾ ದಿನವನ್ನು ಆಚರಿಸಲಾಯಿತು             

 ಉಳ್ಳಾಲ ಪುರಸಭಾ ವ್ಯಾಪ್ತಿಯ ಎಲ್ಲಾ ವಿಭಾಗದ ಶಾಲಾ - ಕಾಲೇಜು ವಿದ್ಯಾರ್ಥಿಗಳಿಗೆ ಘನತ್ಯಾಜ್ಯ ವಸ್ತು ನಿರ್ವಹಣೆ ಕುರಿತು ಅರಿವು ಮೂಡಿಸಲು ಪೌರಾಡಳಿತ ನಿರ್ದೇಶನಾಲಯದ ಆದೇಶದಂತೆ ದಿನಾಂಕ 26-10-2011 ರಂದು ಚಿತ್ರಕಲೆ , ಪ್ರಬಂದ ಹಾಗೂ ಭಾಷಣ ಸ್ಪರ್ದೆಯನ್ನು ಹಮ್ಮಿಕೊಳ್ಳಲಾಗಿತ್ತು.  ತೀರ್ಪುಗಾರರಾಗಿ ಶ್ರೀ ನವೀನ್ ಕುಮಾರ್ , ವೈದ್ಯಾಧಿಕಾರಿ,  ಶ್ರೀಮತಿ ಐರಿನ್ ರೆಬೆಲ್ಲೊ , ಕೌಶಲ್ಯ ಅಭಿವೃದ್ದಿ ಮತ್ತು ಜೀವನಾದಾರ ಪರಿಣಿತರು , ಡಿಯುಡಿಸಿ ದ.ಕ,  ಹಾಗೂ ಶ್ರೀ ನೆಲ್ಸನ್ ಡಿಮೆಲ್ಲೋ , ಪ್ಲೇಸ್‌ಮೆಂಟ್ ಆಪೀಸರ್ , ಸೈಂಟ್ ಜೋಸೆಪ್ ಇಂಜಿನಿಯರಿಂಗ್ ಕಾಲೇಜು, ಇವರು ಉಪಸ್ಥಿತರಿದ್ದರು.

 

     

____________________________________________________________________________________

         ______________________________________________________________________

ಉಳ್ಳಾಲ ಪುರಸಭೆಯ ಮನೆ ಕಂದಾಯ ತೆರಿಗೆ, ನೀರಿನ ತೆರಿಗೆ, ಪುರಸಭೆ ಒಡೆತನದ ಅಂಗಡಿ ಬಾಡಿಗೆ, ವ್ಯಾಪಾರ ಲೈಸೆನ್ಸ್ ಫೀ ಯನ್ನು ಮಾರ್ಚ್ 2012ರ ಒಳಗೆ ತಪ್ಪದೆ ಪಾವತಿ  ಕುರಿತಂತೆ ಹಾಗೂ ಮನೆ ಮನೆ ಕಸ ಸಂಗ್ರಹ ಕುರಿತಂತೆ ಮೈಕ್  ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.

 

                                                  

_   

        

No. Of Visitors :
Last Updated   : 14/05/2012 Release History
Release 2.0.0, Powered By Karnataka Municipal Data Society & maintained by Ullal TMC
This website can best viewed with the resolution 1024 * 768 using Internet Explorer 7.0 or above.
Valid CSS!